From Parents

Prof. R.S.KakkasagriReally, I am proud to say that, within the span of 4 years, Basava Public School has blossomed at its peak. No other educational institute made such a  hasty progress within a short period. May the Almighty bless your bright institution with utmost progress and prosperity in future.

 

Prof. R.S.Kakkasagri

 

“ಸುಂದರ ವನದ ಸುಮಗಳು”

ಮಕ್ಕಳು ಬೆಳೆದೆಂತೆಲ್ಲ ಯಾವ ಶಾಲೆಗೆ ಸೇರಿಸಬೇಕು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಎಲ್ಲ ಪಾಲಕರಂತೆ ನಾನು ಹೊರತಾಗಿರಲಿಲ್ಲ. ಎಲ್ಲ ಶಾಲೆಗಳ ಹಣೆಬರಹವು ಅಷ್ಟೇ ಎಂಬ ಉಡಾಫೆಯ ಮಾತು, ಜಾನರಿದ್ದವರು ಯಾವ ಶಾಲೆಯಲ್ಲಿ ಕಲಿತರು (ಕಲೈಯದಿದ್ದರು) ಜಾಣರಾಗುತ್ತಾರೆ ಎಂಬ ವೇದಾಂತ ತುಂಬಿದ ಉದಾಸಿನ ಮಾತುಗಳು ನನ್ನ ಪ್ರಶ್ನೆಯನ್ನು ಇನಷ್ಟು ಜತಿಳಗೊಳಿಸಿ ಯಕ್ಷ ಪ್ರಶ್ನೆಯನ್ನಾಗಿಸಿತು.

ಹತ್ತಾರು ಶಾಲೆಗಲಿರುವ ನಮ್ಮ ಊರಲ್ಲಿ ಒಂದೊಂದು ಶಾಲೆಗಳು ಒಂದೊಂದು ವಿಧ, ಅವರದೇ ಒಂದೊಂದು ವಿಧಾನ , ತತ್ವಾದರ್ಶ ಕೊನೆಗೆ ಬಂದಿದ್ದು “ ಶ್ರೀ ಬಸವ ಪಬ್ಲಿಕ ಸ್ಕೂಲ್” ಗೆ ಇಲ್ಲಿಗೆ ಬರುವ ವೇಳೆಗೆ ನನ್ನಲ್ಲಿದ್ದ ಎಲ್ಲಾ ಹುರುಪು ಸೋರಿಹೋಗಿ ಎಲ್ಲಾ ಶಾಲೆಗಳ ಹಣೆಬರಹ ಅಷ್ಟೇ ಎಂಬ ಮಾತು ನಿಜವೆನಿಸತೊಡಗಿತ್ತು, ಆದರೆ ಇಲ್ಲಿಯ ಪ್ರಾಚಾರ್ಯರಾದ ಶ್ರೀ ಮಂಜುನಾಥ ಕುಲಕರ್ಣಿಯವರನ್ನು ಭೇಟಿಮಾಡಿ ಮಾತನಾಡಿಸಿದಾಗ ಇಲ್ಲೇನೋ ಭಿನ್ನತೆ ಎನಿಸಿತು.

ಶ್ರೀ ಬಸವ ಪಬ್ಲಿಕ ಶಾಲೆಯಲ್ಲಿ ಪಟ್ಯಕ್ರಮದ ಜೊತೆಗೆ , ಇನ್ನಿತರ ಚತಿವಟಿಕೆಗಳಾದ ಡ್ರಾಯಿಂಗ್, ಪೇಂಟಿಂಗ , ಆಟಗಳು , ಹಾಡು ನ್ರತ್ಯಕಲೆಗಳಿಗೂ ಪ್ರೋತ್ಸಾಹ ಕಂಡು ಬಂದಿತು. ಮೊದಲ ವರ್ಷದಲ್ಲಿ ಬದಲಾವಣೆಯ ಹಾದಿಯಲ್ಲಿದ್ದುದು ಸಮಾಧಾನವಾಗಿದೆ.ಮನೆಯ ಸುಸ್ಥಿಗೆ ಯಜಮಾನ ಹೇಗೆ ಕಾರನಿಭುತನೋ ಹಾಗೆ ಶಾಲೆಯ ಪ್ರಾಚಾರ್ಯರರು ಅಂದರೆ ಅತಿಶಯೋಕ್ತಿಯಾಗಲಾರದು. ಮಕ್ಕಳಿಗೆ ಅವರ ಕುರಿತು ಭಯದ ಜೊತೆಗೆ ಗೌರವವೂ ಇದೆ. ತಪ್ಪು ಮಾಡಿದರೆ ಶಿಕ್ಷೆ ಖಂಡಿತವಾಗಲೂ ಎಂಬುದು ಮನವರಿಕೆಯಾಗಿದೆ. ಪಾಲಕರ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂಧಿಸುವ ಪ್ರಾಚಾರ್ಯರರ ಕಾರ್ಯತತ್ಪರತೆ ಮೆಚ್ಚುವಂತದ್ದು.

ಮಕ್ಕಳಲ್ಲಿ spelling improvement ಗಾಗಿ ದಿನಕ್ಕೊಂದು ಹೊಸ ಇಂಗ್ಲೀಷ ಶಬ್ದ ಕಲಿಸಿ ಪ್ರತಿ ತಿಂಗಳು ಅದಕ್ಕೆಂದೇ ಕಿರು ಪರೀಕ್ಷೆ ನಡೆಸುವುದು , ಪ್ರತಿ ಶನಿವಾರ ಹಿಂದಿ ದಿವನವನ್ನಾಗಿ ಆಚರಿಸುವುದು , ಪ್ರತಿದಿನದ ಮಹತ್ವವನ್ನು ತಿಳಿಸುವ ಕ್ಯಾಲೆಂಡರ ಮೊದಲೇ ತಿಳಿಸಿ ಮಕ್ಕಳಿಗೆ ಅವುಗಳ ಕುರಿತು ಮಾತನಾಡಲು ಪ್ರೋತ್ಸಾಹಿಸುವುದು ಎಲ್ಲವು ಮೆಚ್ಚುಗೆಗೆ ಪಾತ್ರ.

ಇವೆಲ್ಲದರ ಜೊತೆಗೆ ಮುಖ್ಯವಾದ ವಿಷಯ ಒಂದಿದೆ , ಪ್ರಾಚಾರ್ಯರರ ಎಲ್ಲಾ ಯೋಜನೆಗಳಿಗೆ , ಕನಸುಗಳಿಗೆ ಒತ್ತೊಗೊಲಾಗಿ ನಿಂತಿರುವದು ಇಲ್ಲಿಯಆಡಳಿತ ಮಂಡಳಿಯ ಸಹಕಾರ , ನಂಬೆಕೆ ಹಾಗೂ ಶಿಕ್ಷಕ ಬಳಗ ಎಂಬುದು ಸ್ಪಷ್ಟ.

ಶ್ರೀಮತಿ ಭಾಗ್ಯವತಿ ಸಪ್ಪರದ

 

 

`

Basava Public School © 2014